ವಿಜಯಪುರ: ಒಂದು ಮೀನಿಗೆ 20 ಲಕ್ಷ ರೂಪಾಯಿ| ದೇಶ-ವಿದೇಶಗಳ ತಳಿ ಪ್ರದರ್ಶನ

ಲೋಕದರ್ಶನ ವರದಿ

ವಿಜಯಪುರ 13: ದಕ್ಷಿಣ ಅಮೆರಿಕದ ಅಮೆಜಾನ್ ನದಿಯಲ್ಲಿ ಕಂಡುಬರುವ ಡೈಮಂಡ್ ಸ್ಟಿಂಗ್ ರೇ ಎಂಬ ಒಂದು ಸೆಂ.ಮೀ. ಅಳತೆಯ ಮೀನಿನ ಬೆಲೆ ಒಂದು ಲಕ್ಷ ರೂ.! ಇದೇ ಮೀನು ಐದು ಸೆಂ.ಮೀ. ಇದ್ದೆ5 ಲಕ್ಷ ರೂ. ಬೆಲೆ. ಒಂದೂವರೆ ಕೆಜಿಯಿದ್ದರೆ ಬರೋಬ್ಬರಿ 20 ಲಕ್ಷ ರೂ.! 

ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಸಮೀಪದ ಆನ್ಲೈನ್ ಟ್ರೇಡಿಂಗ್ ಸಂಕೀರ್ಣದ ಆವರಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಮತ್ಸ್ಯ ಮೇಳದಲ್ಲಿ ಪ್ರದರ್ಶನಕ್ಕೆ ಇಡ ಲಾಗಿರುವ ದುಬಾರಿ ಮೀನುಗಳಿವು. 

ಡೈಮಂಡ್ ಸ್ಟಿಂಗ್: 

ರೇ ಮೀನನ್ನು ಅಮೆರಿಕದಲ್ಲಿ ವಾಸ್ತು ಮೀನಾಗಿ ಅಕ್ಟೇರಿಯಂನಲ್ಲಿ ಇಡಲಾಗುತ್ತದೆ. ಇದಲ್ಲದೆ ಅಲಿಗೇಟರ್ ಗಾರ್ ಎಂಬ ಮೀನಿಗೆ 2 ಲಕ್ಷ ರೂ., ಲಿಯೋಪಾರ್ಢ್  ಡಿಸ್ಕಸ್ ಮೀನಿನ ದರ 1 ಲಕ್ಷ ರೂ., ಚೀನಾದ ವಾಸ್ತುಮೀನು ಫ್ಲವರ್ ಹಾರ್ನ  ಬೆಲೆ 70 ಸಾವಿರ ರೂ. ಇದೆ. ಹೀಗೆ ಬೆಲೆಬಾಳುವ ಮೀನುಗಳು ಜನರನ್ನು ಆಕರ್ಷಿಸುತ್ತಿವೆ. ಮತ್ಸ್ಯಮೆಳ ಮೂರು ದಿನ ನಡೆಯಲಿದೆ. 

ತರಹೇವಾರಿ ಮೀನು: 

ಮೇಳಳದಲ್ಲಿ ಸಿಲ್ವರ್ ಅರೋವನ್, ರೆಡ್ಟೇಲ್ ಅರೋನ್, ಅಲ್ಬಿನೋ ಗೌರಾಮಿ ಹೆಡ್ಗೋಲ್ಡ್, ಆರೆಂಜ್ ಮಾರ್ಫ, ಆರೆಂಜ್ ಕೋಯಿ, ಮಿಲ್ಕ್ ಕೊಯಿ ಕಾರ್ಫ, ಸಪರ್ೆಟೆಟ್ರಾ, ವೆನಿಲ್ಲಾ ಕಾರ್ಪ, ಗ್ರೀನ್ಸ್ಕೇಟ್ಸ್, ನಿಯೊ?ನ್ ಟೆಟ್ರಾ, ಪೆನ್ಸಿಲ್ ಟೆಟ್ರಾ, ಪಫರ್, ಟೈಗರ್ ಬಾರ್ಬ, ರೋಜಿ ಬಾರ್ಬ, ಸಿಂಗಾಪುರ್ ಗಪ್ಟಿ, ಟೈಗರ್ ಆಸ್ಕರ್, ಗ್ರೀನ್ ಟೆರರ್, ತಿಲಾಪಿಯಾ, ಗೊ?ಲ್ಡನ್ ಕ್ಯಾಟ್ ಫಿಶ್, ಸಿಲ್ವರ್ ಶಾರ್ಕ, ಚೆರ್ರ್  ಬಾರ್ಬ, ಡೈಮಂಡ್ ಆಂಗಲ್, ಗ್ರೀನ್ ಟೈಗರ್, ಹಾಕಿ ಸ್ಟಿಕ್ ಟೆಟ್ರಾ, ಬ್ಲಾಕ್ ಶಾಕರ್್ ಹೀಗೆ ದೇಶ-ವಿದೇಶದ ಮೀನುಗಳು ಜನರ ಗಮನ ಸೆಳೆಯುತ್ತಿವೆ. 

90ಕ್ಕೂ ಹೆಚ್ಚು ಅಕ್ವೇರಿಯಂ: 90ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶಿಸಲಾಗಿದೆ. ಮೂರು ದಿನಗಳ ಮತ್ಸ್ಯಮೇಳದಲ್ಲಿ ಸಿಹಿ ನೀರಿನ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್ ಅಕ್ವೇರಿಯಂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಮುದ್ರದ ಒಳಭಾಗದಲ್ಲಿ ಕಂಡುಬರುವ ಸಸ್ಯಗಳನ್ನಿಟ್ಟು ಪ್ರದರ್ಶಿಸುವ ಪ್ಲಾಂಟೆಡ್ ಅಕ್ವೇರಿಯಂ, ಅರ್ಧ ಭಾಗ ನೀರಿನ ಒಳಭಾಗದಲ್ಲಿ ಹಾಗೂ ಅರ್ಧ ಸಸ್ಯ ನೀರಿನಿಂದ ಹೊರಗೆ ಇರುವ ಅಕ್ವೇರಿಯಂಗಳು ಗಮನ ಸೆಳೆಯುತ್ತಿವೆ.